Students are aware of environmental issues

ಕಲಬುರಗಿ,ಮೇ.31-ನಗರದ ರೈಲ್ವೆ ನಿಲ್ದಾಣದಲ್ಲಿ ರೈಲೊಂದು ಬಂದು ನಿಂತಿದೆ. ಈ ರೈಲನ್ನು ನೋಡಲು, ರೈಲಿನ ಬೋಗಿಯೊಳಗೆ ಹೋಗಲು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ದೌಡಾಯಿಸುತ್ತಿದ್ದಾರೆ. ಈ ರೈಲು ನಿಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ. ಮೂರು ದಿನಗಳವರೆಗೆ ನಿಂತ ಸ್ಥಳದಲ್ಲಿಯೇ ನಿಲ್ಲಲಿದೆ. ಪರಿಸರ ಬದಲಾವಣೆಯ ಬಗ್ಗೆ ನಿಮ್ಮಲ್ಲಿ ಅಗಾಧವಾದ ಅರಿವು ಮೂಡಿಸಲಿದೆ.
ಆ ರೈಲೇ ಪರಿಸರ ಬದಲಾವಣೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಂಬಂಧ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾರಂಭಿಸಿರುವ ” ಸೈನ್ಸ್ ಎಕ್ಸಪ್ರೆಸ್”.
ನಗರದ ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಯಾಗಿದ್ದು, ಮೂರು ದಿನಗಳವರೆಗೆ ಇಲ್ಲಿಯೇ ಇರಲಿದೆ. 16 ಬೋಗಿಗಳುಳ್ಳ ಹವಾನಿಯಂತ್ರಿತ ಸೈನ್ಸ್ ಎಕ್ಸಪ್ರೆಸ್ ರೈಲಿನಲ್ಲಿ ಪರಿಸರ ಬದಲಾವಣೆಯ ಕುರಿತಂತೆ ಅರಿವು ಮೂಡಿಸುವ ಚಿತ್ರಗಳು, ಟೀವಿ ಇದೆ.
ಮೊದಲನೇ ಬೋಗಿಯಲ್ಲಿ ” ಪರಿಸರ ಬದಲಾಣೆಯ ಕುರಿತಂತೆ ಅರಿವು ಮೂಡಿಸುವ ಚಿತ್ರಗಳು, ಎರಡನೇ ಬೋಗಿಯಲ್ಲಿ ಪರಿಸರ ಬದಲಾವಣೆಯ ಪರಿಣಾಮ, ಮೂರು ಮತ್ತು ನಾಲ್ಕನೇ ಬೋಗಿಯಲ್ಲಿ ಪರಿಸರ ಬದಲಾವಣೆಯೊಂದಿಗೆ ಹೊಂದಾಣಿಕೆ, ಐದನೇ ಬೋಗಿಯಲ್ಲಿ ಪರಸರ ರಕ್ಷಣೆ ಅನುಸರಿಸಬೇಕಾದ ಕ್ರಮ, ಆರನೇ ಬೋಗಿಯಲ್ಲಿ ಪರಿಸರ ರಕ್ಷಣೆಗೆ ಭಾರತದ ಕ್ರಮ, ಏಳನೇ ಬೋಗಿಯಲ್ಲಿ ಪರಿಸರ ರಕ್ಷಣೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ತೆಗೆದುಕೊಂಡಿರುವ ಕ್ರಮಗಳು, ಎಂಟನೇ ಬೋಗಿಯಲ್ಲಿ ಪರಿಸರ ಬದಲಾವಣೆಗೆ ಸರಕಾತ್ಮಕ ಕ್ರಮ, ಒಂಬತ್ತನೇ ಬೋಗಿಯಲ್ಲಿ ಜೈವಿಕ ತಂತ್ರಜ್ಞಾನ ಬಳಕೆ, ಹತ್ತನೇ ಬೋಗಿಯಲ್ಲಿ ಜೈವಿಕ ತಂತ್ರಜ್ಞಾನದಲ್ಲಿನ ಹೊಸ ಸಂಶೋಧನೆ, ಹನ್ನೊಂದನೆ ಬೋಗಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಂಶೋಧನೆಗಳು, ಹನ್ನೆರಡನೇ ಬೋಗಿಯಲ್ಲಿ ಮಕ್ಕಳ ವಿಭಾಗ, ಹದಿಮೂರನೇ ಬೋಗಿಯಲ್ಲಿ ವಿಜ್ಞಾನ ಪ್ರಯೋಗಾಲಯವಿದೆ. ಒಟ್ಟಾರೆ ಪರಿಸರ ಬದಾಲಾವಣೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಅರಿವು ಮೂಡಿಸುವ, ಪರಿಸರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸೈನ್ಸ್ ಎಕ್ಸಪ್ರೆಸ್ ಒದಗಿಸುತ್ತಿದೆ.
@12bc = ಪರಿಸರ ಬದಲಾವಣೆಯ ಬಗ್ಗೆ ಅರಿವು
ಪರಿಸರ ಬದಲಾವಣೆಯ ಬಗ್ಗೆ ಸೈನ್ಸ್ ಎಕ್ಸಪ್ರೆಸ್ ರೈಲು ಸಾಕಷ್ಟು ಅರಿವು ಮೂಡಿಸಿದೆ. ಕೈಗಾರಿಕೆಗಳಿಂದ ಇಂಗಾಲದ ಡೈಆಕ್ಸೈಡ್ ಹೆಚ್ಚಳವಾಗಿ ಪರಿಸರ ಯಾವ ರೀತಿಯಲ್ಲಿ ವಿನಾಶವಾಗುತ್ತಿದೆ ಎಂಬುವುದನ್ನು ತಿಳಿದೊಂಡಿದ್ದೇವೆ. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳುವಳಿಕೆ ನೀಡಲಾಗಿದೆ ಎಂದು ಸೈನ್ಸ್ ಎಕ್ಸಪ್ರೆಸ್ ರೈಲು ವೀಕ್ಷಣೆಗೆ ಆಗಮಿಸಿದ್ದ ಆರ್ಯನ್, ಎಸ್.ಬಿ.ಆರ್., ನೋಬಲ್ ಮತ್ತು ಎಸ್.ಆರ್.ಎನ್.ಮೆಹತಾ ಶಾಲೆಯ ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಿಳಿಸಿದರು.
ಸೈನ್ಸ್ ಎಕ್ಸಪ್ರೆಸ್ ರೈಲು ನಗರಕ್ಕೆ ಬಂದಿದ್ದು ತುಂಬಾ ಸಂತಸ ತಂದಿದೆ. ವಿಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿ ದೊರೆಯಿತು ಎಂದು ಆರ್ಯನ್ ಶಾಲೆಯ ವಿದ್ಯಾರ್ಥಿಗಳಾದ ನಿಖಿಲ್, ಪ್ರೇಮ್, ಎಸ್.ಆರ್.ಎನ್.ಮೆಹತಾ ಶಾಲೆಯ ಕೀರ್ತನ್, ಸರ್ವೇಶ್, ವೇದಾಂತ ತಿಳಿಸಿದರು.
@12bc = ವಿದ್ಯಾರ್ಥಿಗಳು ಇದರ ಲಾಭ ಪಡೆಯಲಿ
ಸೈನ್ಸ್ ಎಕ್ಸಪ್ರೆಸ್ ರೈಲು ವೀಕ್ಷಿಸಿದ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ” ಪರಿಸರ ಬದಲಾವಣೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸೈನ್ಸ್ ಎಕ್ಸಪ್ರೆಸ್ ರೈಲನ್ನು ವೀಕ್ಷಿಸಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಮೂರು ದಿನಗಳಕಾಲ ರೈಲು ಇಲ್ಲಿಯೇ ಇರಲಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು. ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇದ್ದರು.

Content from Sanjevani

Comments
Facebooktwittergoogle_plusredditpinterestlinkedinmail

Leave a Reply

Facebook