SDPI leaders meet the victims of Guarakshak goons violence, condemn the heinous act

ಕೊಂಡಂಗೇರಿ ಬಶೀರ್ ಮತ್ತು ಹಂಸ ರವರು ಕಗ್ಗೋಡ್ಲುವಿನ ಗಣಪತಿಯವರಿಂದ  ಜಾನುವಾರುಗಳನ್ನು ಖರೀದಿಸಿ ವಾಹನದಲ್ಲಿ ಕೊಂಡಯ್ಯುತ್ತಿರುವಾಗ ವಾಹನವನ್ನು ಅಡ್ಡಗಟ್ಟಿ ಜಾನುವಾರ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಹಿಂದುತ್ವದ 20 ಮಂದಿ ಗೂಂಡಾಗಳು ಪಿಕ್ ಅಪ್ ವಾಹನಕ್ಕೆ  ಗುಂಡಿನ ದಾಳಿ ನಡೆಸಿ, ಅಮಾಯಕರಾದ ಬಶೀರ್ ಹಾಗೂ ಹಂಸ ರವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಈ ಘಟನೆಯನ್ನು  ಎಸ್ಡಿಪಿಐ ತೀವ್ರವಾಗಿ ಖಂಡಿಸುತ್ತದೆ.ಮತ್ತು ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ಬಶೀರ್ ತೀವ್ರ ಅಸ್ವಸ್ಥರಾಗಿದ್ದು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
*ಆಸ್ಪತ್ರೆಗೆ ಭೇಟಿಯಾದ SDPI ನಿಯೋಗ ಹಲ್ಲೆಗೊಳಗಾದ ಬಶೀರ್ ನಿಗೆ  ಧೈರ್ಯತುಂಬಿ,ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ತಮಗೆ ನ್ಯಾಯ ಸಿಗುವವರೆಗೂ SDPI ನಿಮ್ಮೊಂದಿಗಿದೆ ಎಂದು ಹೇಳಿದರು*
ನಿಯೋಗದಲ್ಲಿ SDPI ದ.ಕ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಜಿಲ್ಲಾ ಪ್ರ.ಕಾರ್ಯದರ್ಶಿ ನವಾಝ್ ಉಳ್ಳಾಲ, ಜಿಲ್ಲಾ ಕಾರ್ಯದರ್ಶಿ ಆಶ್ರಪ್ ಮಂಚಿ ಮತ್ತಿತರು ಉಪಸ್ಥಿತರಿದ್ದರು.

img_20160915_5960 img-20160915-wa0022

img_20160915_11224

Comments
Facebooktwittergoogle_plusredditpinterestlinkedinmail

Leave a Reply

Facebook