Gulbarga North Ticket issue, supporters of Ilyas Seth Baghban hold protest.

ಕಲಬುರ್ಗಿ (ಏ.02) : ಕಲಬುರ್ಗಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೂಬಂಡಾಯದ ಬಿಸಿ ತಟ್ಟಿದೆ. ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಖಮರುಲ್ ಇಸ್ಲಾಂ ಪತ್ನಿ ಖನೀಸಾ ಬೇಗಂರನ್ನು ಅಂತಿಮಗೊಳಿಸುವ ಸುಳಿವು ಸಿಗುತ್ತಿದ್ದಂತೆಯೇ ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷ ಇಲಿಯಾಸ್ ಭಾಗವಾನ್ ಬೆಂಬಲಿಗರು ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಟಿಕೇಟ್ ಭಾಗವಾನ್ ಗೆ ತಪ್ಪಿಸುವಂತಿಲ್ಲ ಎಂದು ಎಚ್ಚರಿಸಿದರು. ಇಲಿಯಾಸ್ ಬೆಂಬಲಿಗರ ಮನವಿ ಸ್ವೀಕರಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಅಫಜಲಪುರದಲ್ಲಿ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸುವ ಮೂಲಕ ಮಾಲಿಕಯ್ಯ ಗುತ್ತೇದಾರ ಕಾಂಗ್ರೆಸ್ ಗೆ ಆಘಾತ ನೀಡಿದ್ದಾರೆ. ಇದನ್ನು ಸರಿಪಡಿಸಲು ಮಾಜಿ ಶಾಸಕ ಎಂ.ವೈ.ಪಾಟೀಲರನ್ನು ಕಾಂಗ್ರೆಸ್ ಸೆಳೆದುಕೊಂಡಿದೆ.

ಅಫಜಲಪುರದ ಸ್ಥಿತಿ ಸರಿಹೋಯಿತು ಅನ್ನುವಷ್ಟರಲ್ಲಿಯೇ ಕಲಬುರ್ಗಿ ಕಾಂಗ್ರೆಸ್ ನಲ್ಲಿ ಬಂಡಾಯದ ಕೂಗು ಕೇಳಿಬಂದಿದೆ. ಕಲಬುರ್ಗಿ ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಖಮರುಲ್ ಇಸ್ಲಾಂ ಪತ್ನಿ ಖನೀಸಾ ಬೇಗಂರನ್ನು ಅಂತಿಮಗೊಳಿಸುವ ಸುಳಿವು ಸಿಕ್ಕ ಕೂಡಲೇ ಎನ್.ಇ.ಕೆ.ಆರ್.ಟಿ.ಸಿ. ಅಧ್ಯಕ್ಷ ಇಲಿಯಾಸ್ ಭಾಗವಾನ್ ಬಂಡಾಯದ ಸುಳಿವು ನೀಡಿದ್ದಾರೆ.

ಅದಕ್ಕೆ ಮುನ್ನುಡಿ ಎಂಬಂತೆ ಇಲಿಯಾಸ್ ಭಾಗವಾನ್ ಬೆಂಬಲಿಗರು ಇಂದು ಕಾಂಗ್ರೆಸ್ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಭಾಗವಾನ್ ಪರ ಘೋಷಣೆ ಕೂಗಿ, ಟಿಕೇಟ್ ಗಾಗಿ ಒತ್ತಾಯಿಸಿದರು. ಭಾಗವಾನ್ ಗೆ ಟಿಕೇಟ್ ತಪ್ಪಿದಲ್ಲಿ ತಕ್ಕ ಪಾಠ ಕಲಿಸುವುದಾಗಿ ಬೆಂಬಲಿಗರು ಎಚ್ಚರಿಸಿದರು.

ಭಾಗವಾನ್ ಬೆಂಬಲಿಗರಿಂದ ಮನವಿ ಸ್ವೀಕರಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಕೆಪಿಸಿಸಿಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಇದುವರೆಗೂ ಯಾವುದೇ ಟಿಕೇಟ್ ಅಂತಿಮಗೊಂಡಿಲ್ಲ. ಭಾಗವಾನ್ ಬೆಂಬಲಿಗರ ಮನವಿಯನ್ನು ಕೆಪಿಸಿಸಿ ಗಮನಕ್ಕೆ ತರಲಾಗುವುದು. ಕೆಪಿಸಿಸಿಯೇ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಜಗದೇವ ಗುತ್ತೇದಾರ ತಿಳಿಸಿದ್ದಾರೆ.

ಖಮರುಲ್ ಇಸ್ಲಾಂ ಪತ್ನಿಗೆ ಉತ್ತರ ಕ್ಷೇತ್ರದ ಟಿಕೇಟ್ ಅಂತಿಮಗೊಳ್ಳುತ್ತಿದ್ದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಸುಳಿವನ್ನು ಇಲಿಯಾಸ್ ಭಾಗವನ್ ನೀಡಿದ್ದಾನೆ. ಭಾಗವಾನ್ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲ ತಾಣದಲ್ಲಿ ಪಕ್ಷೇತರನಾಗಿ ಸ್ಪರ್ಧಿಸುತ್ತಾನೆ ಎಂದು ಪ್ರಚಾರ ನಡೆಸಿದ್ದಾರೆ.

ಅಫಜಲಪುರ ಕ್ಷೇತ್ರದ್ದು ಸರಿಹೋಯಿತು ಅನ್ನುವಷ್ಟರಲ್ಲಿಯೇ ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಬಂಡಾಯದ ಬಿರುಕು ಕಾಣಿಸಿಕೊಂಡಿರುವುದು ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Comments
Facebooktwittergoogle_plusredditpinterestlinkedinmail

Leave a Reply

Facebook