ಅವೈಜ್ಞಾನಿಕ ಸಿಗ್ನಲ್ : ಪಾದಚಾರಿಗಳಿಗೆ ಕಿರಿಕಿರಿ

ಕಲಬುರಗಿ, : ನಗರದ ಸಂಚಾರ ನಿಯಂತ್ರಣಕ್ಕೆಂದು ಕೆಲವೇ ಕೆಲವು ವೃತ್ತಗಳಿಲ್ಲಿ ಅಳವಡಿಸಿರುವ ಸಿಗ್ನಲ್‍ಗಳು ನಿಯಮ ಅವೈಜ್ಞಾನಿಕವಾಗಿದ್ದು, ಪಾದಾಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವ ದೃಶ್ಯಗಳು ನಿತ್ಯ ಕಂಡು ಬರುತ್ತಿವೆ.
ನಗರದ ಬಹುತೇಕ ಎಲ್ಲಾ ರಸ್ತೆಗಳ ಪಕ್ಕದಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ಫುಟ್‍ಪಾತ್ ಇಲ್ಲದಂತಾಗಿದೆ. ಪಾಲಿಕೆಯಿಂದ ರಸ್ತೆಯ ಪಕ್ಕದಲ್ಲಿ ನಾಲ್ಕು ಅಡಿ ಅಗಲದ ಚರಂಡಿಗಳು ನಿರ್ಮಿಸಿ ಅವುಗಳನ್ನೇ ಫುಟ್‍ಪಾತ್ ಎಂದು ಬಿಂಬಿಸುವಂತೆ ಮಾಡಲಾಗಿದೆ. ಚರಂಡಿಯ ಮೇಲೆ ಹಾಕಿರುವ ಕಾಂಕ್ರೀಟ್ ಸ್ಲಾಬ್‍ನ ಮಧ್ಯೆ ಅಲ್ಲಲ್ಲಿ ಚರಂಡಿಯಲ್ಲಿನ ಹೂಳು ತೆಗೆಯುವದಕ್ಕೆ ಬಿಟ್ಟಿರುವ ರಂದ್ರಗಳಿಂದ ಜನರಿಗೆ ಅಪಾಯವಂತೂ ಖಚಿತ ಎನ್ನುವಂತಾಗಿದೆ.
ನಗರದ ಜನನಿಬಿಡ ಪ್ರದೇಶವಾದ ಸರದಾರ ವಲ್ಲಭ ಭಾಯಿ ಪಟೇಲ ವೃತ್ತ(ತಿಮ್ಮಾಪುರಿ)ಕ್ಕೆ ಆರು ರಸ್ತೆಗಳು ಇವೆ. ವೃತ್ತದಿಂದ ಹಾದು ಹೋಗುವ ಒಂದೇ ಒಂದು ರಸ್ತೆಯ ಒಂದು ಬದಿಗೆ ಮಾತ್ರ ಪಾದಚಾರಿ ಪಥ ಮಾತ್ರ ನಿರ್ಮಿಸಲಾಗಿದ್ದು, ಅದುಕೂಡ ಅವೈಜ್ಞಾನಿಕವಾಗಿದೆ. ಪಟೇಲ ವೃತ್ತದಿಂದ ನಗರಾಭಿವೃದ್ಧಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗ ಮಾರ್ಗವಾಗಿ ಜೆಸ್ಕಾಂ ಕಚೇರಿಯವರೆಗೆ ಮಾತ್ರ ಪಾದಚಾರಿಗಳ ಪಥ(ಫೂಟ್‍ಪಾತ್)ಮಾತ್ರ ನಿರ್ಮಿಸಲಾಗಿದೆ. ನಗರಾಭಿವೃದ್ಧಿ ಕಚೇರಿ ಎದುರಿಗೆ ಇರುವ ಫುಟ್‍ಪಾತ್ ಮೇಲೆ ವೃದ್ಧರು, ಮಹಿಳೆಯರು ನಡೆಯುವದೇ ಒಂದು ಹರಸಾಹಸವಾಗುತ್ತದೆ. ಫೂಟ್‍ಪಾತ್ ಮಧ್ಯದಲ್ಲಿಯೇ ಒಳಚರಂಡಿಯ ಮ್ಯಾನ್‍ಹೋಲ್ ನಿರ್ಮಾಣ, ಚರಂಡಿಗೆ ಸಾಕಷ್ಟು ಸ್ಥಳವಿದ್ದರು ಫುಟಪಾತ್ ಮಧ್ಯದಲ್ಲಿಯೇ ಮಾಡಲಾಗಿದೆ.

ವಾಹನಗಳ ಸಂಚಾರ ನಿಯಂತ್ರಣ ಹಾಗೂ ಅಪಘಾತಗಳು ತಡೆಯಲು ಸಿಗ್ನಲ್‍ಗಳು ಅಳವಡಿಲಾಗುತ್ತದೆ. ವಾಹನ ಸವಾರರು ನಿಯಮಾನುಸಾರ ಸಾಲಗಟ್ಟಿ ತಮ್ಮ ವಾಹನಗಳು ನಿಲ್ಲಿಸುವದಿಲ್ಲ, ಬದಲಾಗಿ ಎಲ್ಲಿ ಸ್ಥಳಾವಕಾಶ ಇದಯೋ ಅಲ್ಲಿ ಬಂದು ವಾಹನ ನಿಲ್ಲಿಸುತ್ತಾರೆ. ಝಿಬ್ರಾ ಲೈನ್ ಮೇಲೆಯೆ ವಾಹನ ನಿಲ್ಲುವದರಿಂದ ಪಾದಚಾರಿಗಳು ಯಾವ ಕಡೆಯಿಂದ ರಸ್ತೆ ದಾಟಬೇಕು ಎನ್ನುವದೇ ತಿಳಿಯದಂತಾಗಿ ವಾಹನಗಳ ಮಧ್ಯದಿಂದಲೆ ಕಷ್ಟಪಟ್ಟು ಹೋಗುವ ಪರಿಸ್ಥಿತಿ ನಿತ್ಯ ಕಾಣುತ್ತದೆ. ಇನ್ನೂ ಕೆಲವು ಕಡೆ ಝಿಬ್ರಾ ಲೈನ್ ಡಿವೈಡರ್‍ಗೆ ಹೋಗಿ ನಿಲ್ಲುವದರಿಂದ ಮುಂದು ಯಾವ ಕಡೆ ಸಾಗಬೇಕು ಎಂದು ತಿಳಿಯದೆ ರಸ್ತೆಯ ಮಧ್ಯದಲ್ಲಿಯೇ ನಡೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಎಡಕಡೆಯ ವಾಹನಗಳು ಎಡಕ್ಕೆ ತಿರುಗಿ ಹೋಗಬೇಕು. ಅಲ್ಲಿಯೂ ವಾಹನಗಳು ನಿಲ್ಲುತ್ತವೆ.
ಜನರ ಸಮಸ್ಯೆಗೆ ಸ್ಪಂಧಿಸುದಾದರೂ ಯಾವಾಗ. ಕೇವಲ ಹಿಂದುಳಿದ ಪ್ರದೇಶ ಎನ್ನುವ ನಮಗೆ ವೈಜ್ಞಾನಿಕ ಅಭಿವೃದ್ಧಿ ಚಿಂತನೆ ಇಲ್ಲವೇ ಎಂಬ ಹಲವು ಪ್ರಶ್ನೆಗಳು ತಾನಾಗಿಯೇ ಮೂಡುತ್ತದೆ. ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿಗೆ ಸಾವಿರ ಕೋಟಿ ಅನುದಾನ ಬಂದು ರಸ್ತೆಗಳು ಹಾಗೂ ಚರಂಡಿಗಳ ಕಾಮಗಾರಿ ಭರದಿಂದ ನಡೆಯುತ್ತಿದೆ. ನಗರದ ಪ್ರಮುಖ ರಸ್ತೆಗಳಿಗೆ ನಗರದ ಪ್ರಮುಖ ರಸ್ತೆಗಳಿಗೆ ಪಾದಚಾರಿ ಪಥ ನಿರ್ಮಿಸಬೇಕು. ಹೋರಾಟಗಳೇ ಕಸಬು ಎನ್ನುವ ಸಂಘಟನೆಗಳು ಎಚ್ಚೆತ್ತುಕೊಂಡು ನಗರದ ಪ್ರಮುಖ ರಸ್ತೆಗಳಿಗೆ ಪಾದಚಾರಿ ಪಥ ನಿರ್ಮಿಸಲು ಒತ್ತಾಯಿ ಒಂದು ಹೋರಾಟವೂ ಕಾಣಲಿಲ್ಲ. ಕಾಟಾಚಾರಕ್ಕೆ ಅಭಿವೃದ್ಧಿಯಾಗದೆ ಭವಿಷ್ಯ ದಿನಗಳ ಕುರಿತು ಅಭಿವೃದ್ಧಿ ಕಾರ್ಯವಾಗಲಿ ಎನ್ನುವದೇ ನಮ್ಮ ಉದ್ದೇಶ.

Comments
Facebooktwittergoogle_plusredditpinterestlinkedinmail

Leave a Reply

Facebook