Bangalore RSS Leader killed for personal rivalry Says Police, Will BJP apologize to People of Karnataka for politics?

ನ್ಯೂಸ್ ಕನ್ನಡ ವರದಿ(21.10.2016): ಆರೆಸ್ಸೆಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದು, ಬಡ್ಡಿ ವ್ಯವಹಾರವೇ ಹತ್ಯೆಗೆ ಕಾರಣ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ತನಿಖಾ ವೇಳೆ ಬಂಧಿತ ಆರೋಪಿಗಳು ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದು, ರಹಸ್ಯ ಸ್ಥಳದಲ್ಲಿ ಇಟ್ಟು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುಪಾರಿ ಕೊಲೆಯಾ ಅಥವಾ ಇವರೇ ಹತ್ಯೆ ಮಾಡಿದ್ದಾರಾ ಎಂದು ತಿಳಿದು ಬರಬೇಕಿದೆ.
ರುದ್ರೇಶ್ 8% ಬಡ್ಡಿಗೆ ಹಣ ನೀಡಿದ್ದರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಬಾರಿ ಜಗಳ ಕೂಡ ನಡೆದಿತ್ತು ಎನ್ನಲಾಗಿದೆ. ಈ ಬಗ್ಗೆ ತಿಳಿದ ಪೊಲೀಸರು ಅವರಿಂದ ಸಾಲ ಪಡೆದವರನ್ನು ಠಾಣೆಗೆ ಕರೆದು ತನಿಖೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.
ರುದ್ರೇಶ್ ಹತ್ಯೆಯಾದ ತಕ್ಷಣ ಸಿಸಿಬಿ ಪೊಲೀಸರು ಮತ್ತು ನಗರ ಪೊಲೀಸರ ತಂಡ ಜೊತೆಯಾಗಿ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಲು ಆರಂಭಿಸಿದ್ದರು. ಈ ಮಧ್ಯೆ ಬಿಜೆಪಿ ರುದ್ರೇಶ್ ಹತ್ಯೆ ಯಲ್ಲಿ ಪಿಎಫ್ ಐ ಕೈವಾಡ ಇದೆ ಎಂದು  ಆರೋಪಿಸಿತ್ತು ಹಾಗೂ   ಘಟನೆ ಖಂಡಿಸಿ ರಾಜ್ಯಾದ್ಯಂತ  ವ್ಯಾಪಕವಾಗಿ ಪ್ರತಿಭಟನೆಯನ್ನು ನಡೆಸಿತ್ತು. ಈ ವೇಳೆ  ಯಡಿಯೂರಪ್ಪ ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಬೇಕು ಎಂದು ಪೊಲೀಸರಿಗೆ ಗಡುವು ನೀಡಿದ್ದರು. ಆದರೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಘಟನೆಯಲ್ಲಿ ಮತೀಯ ಸಂಘಟನೆಗಳ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದೆ.

 

News Kannada

Comments
Facebooktwittergoogle_plusredditpinterestlinkedinmail

Leave a Reply

Facebook