ಪ್ರಶಸ್ತಿ ಮೌಲ್ಯಯುತವಾಗಿರಬೇಕು : ಜಮಾದಾರ

ಕಲಬುರಗಿ : ಪ್ರಶಸ್ತಿ ಮೌಲ್ಯಯುತವಾಗಿರಬೇಕು ಪ್ರಶಸ್ತಿ ಪಡೆದುಕೊಳ್ಳುವರು ಹಾಗೂ ನೀಡುವವರು ಕೂಡ ಮೌಲ್ಯವನ್ನು ಹೊಂದಿರಬೇಕು ಅಂದಾಗ ಮಾತ್ರ ಆ ಪ್ರಶಸ್ತಿಗೆ, ಪಡೆದಂತಹ ಪುರಸ್ಕøತರಿಗೆ ನಿಜವಾದ ಗೌರವ ದೊರೆಯುತ್ತದೆ ಎಂದು ಉದಯವಾಣಿ ಪತ್ರಿಕೆಯ ವರದಿಗಾರ ಪಶಸ್ತಿ ಪುರಸ್ಕøತ ಸೂರ್ಯಕಾಂತ್ ಜಮಾದಾರ ಹೇಳಿದರು.
ಜಿಲ್ಲೆಯ ಸೇಡಂ ಪಟ್ಟಣದ ಕೋತ್ತಲ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ವತಿಯಿಂದ ಪತ್ರಕರ್ತ ದಿ. ವೀರಭದ್ರ ಮಾಮನಿ ಅವರ ಸ್ಮರಣಾರ್ಥ ನೀಡುವ ಹೈದ್ರಾಬಾದ ಕರ್ನಾಟಕ ಪತ್ರಕರ್ತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದು ಮಾತನಾಡಿದ ಅವರು, ಓರ್ವ ಗ್ರಾಮೀಣ ಭಾಗದ ಪತ್ರಕರ್ತನ ನೆನಪಿನಲ್ಲಿ ನೀಡುವ ಅತ್ಯಂತ ಮೌಲ್ಯವುಳ್ಳ ಪ್ರಶಸ್ತಿ ಹಾಗೂ ಮೌಲ್ಯವುಳ್ಳ ಬೊಮ್ನಳ್ಳಿ ಪ್ರತಿಷ್ಠಾನದಿಂದ ಪ್ರಶಸ್ತಿ ಪಡೆಯುವುದು ನನಗೆ ನಿಜವಾಗಿಯೂ ಗರ್ವವಾಗುತ್ತಿದೆ ಎಂದರು.
ಇಂದು ಪತ್ರಿಕೆಗಳು ಹಾಗೂ ದೃಶ್ಯ ಮಾದ್ಯಮಗಳು ಡುಡ್ಡಿಗಾಗಿ ಸುದ್ದಿಮಾಡುವ ಪ್ರಕ್ರಿಯೆಗಳು ಹೆಚ್ಚಾಗುತ್ತಿವೆ. ಇಂದು ಮಾದ್ಯಮಗಳು ನೈಜ ಸುದ್ದಿಯನ್ನು ಬಿಟ್ಟು ಇನ್ನಿತರ ಸುದ್ದಿಗಳನ್ನು ವೈಭವಿಕರುಸುತ್ತಿವೆ. ಇದರಿಂದ ಪತ್ರಿಕೊದ್ಯಮ ಮತ್ತು ಪತ್ರಿಕೆಗಳ ಮೂಲ ಉದ್ದೇಶಗಳು ನಶಿಸುತ್ತಿದೆ. ಇದರಿಂದ ಸಮಾಜದ ಬದಲಾವಣೆಯಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ರಾಜಕಾರಣದ ಕಡೆಗೆ ವಾಲುತ್ತಿದ್ದೆವೆಯೇ ? ರಾಜಕಾರಣಿಗಳ ಹಣದ ಆಮಿಷಗಳಿಗೆ ಕೇಲ ಪತ್ರಕರ್ತರು ಬಲಿಯಾಗುತ್ತಿದ್ದಾರೆ. ಇನ್ನೂ ಕೇಲವರು ರಾಜಕಾರಣಿಗಳೊಂದಿಗೆ ವೈಯಕ್ತಿಕ ದ್ವೇಷಕ್ಕೆ ಓಳಗಾಗುತ್ತಿದ್ದಾರೆ. ಯಾವಾಗ ಒರ್ವ ಪತ್ರಕರ್ತ ಮಾನಸಿಕ ಹಿಂಸೆ ಅನುಭವಿಸುತ್ತಾನೋ ಆಗ ನಿಜವಾಗಿಯೂ ಪತ್ರಕರ್ತರ ಅಂಗವೈಫಲ್ಯಕ್ಕೆ ಓಳಗಾದ ಹಾಗೇ ಇದು ಪತ್ರಕರ್ತರಿಗೆ ಒಳ್ಳೆಯದಲ್ಲ, ಪತ್ರಕರ್ತನಿಗೆ ಮುಕ್ತವಾದ ಸ್ವಾತಂತ್ಯ್ರ ನೀಡಬೇಕು ಅಂದಗಾ ಮಾತ್ರ ನೈಜ ಸುದ್ದಿ ಹೊರಬರಲು ಸಹಕಾರಿಯಾಗುತ್ತದೆ ಎಂದರು.

ಕಲಬುರಗಿಯ ಸತ್ಯಕಾಮ ದಿನಪತ್ರಿಕೆಯ ಸಂಪಾದಕ ಪಿ.ಎಮ್. ಮಣ್ಣೂರು ಮಾತನಾಡಿ, ಪ್ರಶಸ್ತಿ ತೆಗೆದುಕೊಳ್ಳುವುದಕ್ಕಿಂತ ಪ್ರಶಸ್ತಿ ನೀಡುವುದು ಅತ್ಯಂತ ಕಷ್ಠದ ಕೆಲಸ, ಯಾವಾಗಲು ಪ್ರಶಸ್ತಿಯನ್ನು ನೀಡುವ ಮೊದಲು ಪತ್ರಕರ್ತರ ಪ್ರಾಮಾಣಿಕ ಸೇವೆಯನ್ನು ಹಾಗೂ ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಈ ನಿಟ್ಟಿನಲ್ಲಿ ಬೊಮ್ನಳ್ಳಿ ಪ್ರತಿಷ್ಠಾನ ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸಿದ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.
ಪ್ರಶಸ್ತಿ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನಸಮಾನ್ಯರ ಹಾಗೂ ಗ್ರಾಮೀಣ ಭಾಗದ ಸಮಸ್ಯೆಗಳನ್ನು ಸಮಾಜಮುಖಿಗೆ ತರುವ ಹಾಗೂ ಆ ಸಮಸ್ಯೆಗೆ ನಿಜವಾದ ಪರಿಹಾರ ಓದಗಿಸುವ ನಿಟ್ಟಿನಲ್ಲಿ ಸುದ್ದಿಮಾಡುವ ಪತ್ರಕರ್ತರಿಗೆ ಹೆಚ್ಚಾಗಿ ಸನ್ಮಾನ ಮಾಡಿ ಅವರನ್ನು ಪ್ರ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನ ಗ್ರಾಮೀಣ ಭಾಗದ ಪತ್ರಕರ್ತರ ನೆನೆಪಿನಲ್ಲಿ ಇನ್ನುಳಿದ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದದು ಎಂದು ಹೇಳಿದರು.
ಈ ಸಮಾರಂಭದಲ್ಲಿ ತೊಟ್ನಳ್ಳಿಯ ಮಹಾಂತೇಶ್ವರ ಮಠದ ತ್ರೀಮೂರ್ತಿ ಶಿವಾಚಾರ್ಯರು, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಸಿದ್ದಪ್ಪ ತಳ್ಳಳ್ಳಿ, ಇನ್ನಿತರರು ಇದ್ದರು, ಮಹಿಪಾಲರೆಡ್ಡಿ ಮುನ್ನೂರು ಸ್ವಾಗತಿಸಿ, ಪ್ರಾಸ್ತಾವಿಸಿದರು, ಪತ್ರಕರ್ತ ಶರಣು ಮಹಾಗಾಂವ್ ನಿರೂಪಿಸಿದರು, ನಾಗಯ್ಯ ಸ್ವಾಮಿ ಬೊಮ್ನಳ್ಳಿ ವಂದಿಸಿದರು.
ಕೋಟ್ :
ಬೊಮ್ನಳ್ಳಿ ಸುದ್ದಿ ಪ್ರತಿಷ್ಠಾನದ ವತಿಯಿಂದ ಪತ್ರಕರ್ತ ದಿ. ವೀರಭದ್ರ ಮಾಮನಿ ಅವರ ಸ್ಮರಣಾರ್ಥ ನೀಡುವ 2016 ನೇ ಸಾಲಿನ ಹೈದ್ರಾಬಾದ ಕರ್ನಾಟಕ ಪತ್ರಕರ್ತ ಪ್ರಶಸ್ತಿಯನ್ನು ಉದಯವಾಣಿ ಪತ್ರಿಕೆಯ ವರದಿಗಾರ ಸೂರ್ಯಕಾಂತ್ ಜಮಾದಾರ ಹಾಗೂ ಯಾದಗಿರಿಯ ಸಯುಂಕ್ತ ಕರ್ನಾಟಕ ವರದಿಗಾರರಾದ ಎಸ್.ಎಸ್ ಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Comments
Facebooktwittergoogle_plusredditpinterestlinkedinmail

Leave a Reply

Facebook