ಶಿಕ್ಷಕರ ಹೆಚ್ಚುವರಿ ಪ್ರಕ್ರೀಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಮನವಿ

Gulbarga : ಸರಕಾರಿ ಶಾಲೆಗಳ ಸಬಲೀಕರಣದ ಹಿತ ದೃಷ್ಟಿಯಿಂದ ಶಿಕ್ಷಕರ ಹೆಚ್ಚುವರಿ ಪ್ರಕ್ರೀಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಯ್ಯ ಬಿ. ಗುತ್ತೇದಾರ ತಿಳಿಸಿದರು.
ಇವತ್ತಿನ ಶೈಕ್ಷಣಿಕ ಆಡಲಿತ ವ್ಯವಸ್ಥೆಯಲ್ಲಿ ಸರಕಾರಿ ಶಾಲೆಗಳು ಸಬಲೀಕರಗೊಳ್ಳುವುದು ಅತಿ ಅವಶ್ಯವಾಗಿದ್ದು, ಈ ದಿಸೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರಕಾರ ಹಮ್ಮಿಕೊಂಡ ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ ಆದಾಗ್ಯೂ ಸಹ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸಮಾನ ಶಾಲಾ ಶಿಕ್ಷಣ ನೀತಿಯನ್ನು ಜಾರಿಗೆ ತರದೇ ಇರುವುದನ್ನು ವಿಷಾದನೀಯವಾಗಿದೆ ಎಂದು ಹೇಳಿದರು.
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು 21 ವಿಷಯಗಳನ್ನು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು 33 ವಿಷಯಗಳನ್ನು ಕಲಿಸಬೇಕಾಗುತ್ತದೆ. ಶಿಕ್ಷಕರು ಶಾಲಾ ಪಾಠದ ಜೊತೆಗೆ ಶಿಕ್ಷಣೇತರ ಕಾರ್ಯಗಳನ್ನು ನಿರ್ವಹಿಸುವದರಿಂದಲೂ ಸಹ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ತೊಂದರೆಯಾಗಿದೆ. ಈ ಮಧ್ಯೆ ಎರಡನೇ ಜುಲೈ 2016ರಂದು ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿ ಶಿಕ್ಷಕರ ಹೆಚ್ಚುವರಿ ಮಾಡುವ ಬಗ್ಗೆ ಆದೇಶ ನೀಡಿದೆ. ವಾಸ್ತವಿಕವಾಗಿ ಇದೇ ಶೈಕ್ಷಣಿಕ ವರ್ಷದ ಜೂನ್ 16 – 2016 ರ ಜ್ಞಾಪನದಂತೆ ಬಹಳಷ್ಟು ತಾಲೂಕು ಜಿಲ್ಲೆಗಳಲ್ಲಿ ಈಗಾಗಲೇ ಹೆಚ್ಚುವರಿ ಶಿಕ್ಷಕರ ಪ್ರಕ್ರೀಯೆ ಮುಕ್ತಾಯವಾಗಿದೆ. ಒಂದೇ ವರ್ಷದಲ್ಲಿ ಎರಡು ಬಾರಿ ಶಿಕ್ಷಕರ ಸ್ಥಳಾಂತರ ಮಾಡುವುದು ಸಮಂಜಸವಲ್ಲ. ಈಗಾಗಲೇ ಶಾಲೆಗಳು ಪ್ರಾರಂಭವಾಗಿ ಶಿಕ್ಷಕರು ತಮಗೆ ನಿಗದಿಗೊಳಿಸಿದ ತರಗತಿಗಳು ಹಾಗೂ ವಿಷಯಗಳನ್ನು ಹಂಚಿಕೆ ಮಾಡಿಕೊಂಡು ಬೋಧನೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯಮಟ್ಟದಲ್ಲಿ ತಾವೇ ಶಿಕ್ಷಕರ ಹೆಚ್ಚುವರಿಯನ್ನು ಗುರುತಿಸುತ್ತಿರುವುದರಿಂದ ಬಹಳಷ್ಟು ಗೊಂದಲವಾಗಳಾಗಿವೆ. ಇದರಿಂದ ಇಲಾಖೆಗೆ ಮತ್ತು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಪೆಟ್ಟು ಬಿಳುತ್ತದೆ. ಕಾರಣ ಹೆಚ್ಚುವರಿ ಶಿಕ್ಷಕರ ಪ್ರಕ್ರೀಯೆಯನ್ನು ಸದ್ಯಕ್ಕೆ ಸ್ಥಗೀತಗೊಳಿಸಿ ಈಗಾಗಲೇಲ ಸಂಘ ಸಲ್ಲಿಸಿದ ಮನವಿಗನುಗುಣವಾಗಿ ಸಂಘದ ಪದಾಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿ ಸಮಗ್ರವಾಗಿ ಅವಲೋಕನವನ್ನು ಮಾಡಿ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿದರು.
ಒಂದು ವೇಳೆ ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಸಂಘವು ಅನಿವಾರ್ಯವಾಗಿ ಉಳಿದ ಬೇಡಿಕೆಗಳೊಂದಿಗೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡದೇ ಹೆಚ್ಚುವರಿ ಶಿಕ್ಷಕರ ಪ್ರಕ್ರೀಯೆಯನ್ನು ತಕ್ಷಣವೇ ಸ್ಥಗಿತಗೊಲಿಸಬೇಕು. ಮತ್ತು ಈಗಾಗಲೇ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕೆಂದು ಸಂಘವು ಆಗ್ರಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಾರಾಮ ಗುಣಾರಿ, ಮಲ್ಲಣ್ಣಾ ಮೇತ್ರಿ, ಬಾಬು ನಾಯಕ, ಶಂಭುಲಿಂಗಯ್ಯ ಸ್ವಾಮಿ, ಪರಮೇಶ್ವರ ದೇಸಾಯಿ, ಬಸವರಾಜ ಸಾಗರ್, ದೇವಿಂದ್ರಪ್ಪ ಯಾದವ, ಸುರೇಶರಾವ ಕುಲಕರ್ಣೀ, ಗೋಪಾಲ್ ಸೇಡಂಕರ್, ಚಂದ್ರಶೇಖರ ಪೂಜಾರಿ,ಗುರುಬಸಪ್ಪಾ ಚಾಂಚಕೋಟೆ, ಮಹಾಲಿಂಗಪ್ಪ ಮೂಲಗೆ, ಮಹೇಶ ಮಳ್ಳಿ, ಮುರುಗೇಂದ್ರ ವೀರಶೆಟ್ಟಿ, ಶರಣಬಸಪ್ಪ ಜೋಗದ, ಗಂಗಾಧರ ಸಾವಳಗಿ, ಬಸವರಾಜ ಜಮಾದಾರ, ಬಸವರಾಜ ಬಳವಂಡಿಗಿ, ಪ್ರಮೋದ, ಬಾಬುರಾವ ಮೌರ್ಯ, ಶಿವರಾಯ ಬೋವ, ಅಶೋಕ ಸೊನ್ನ, ಅಬ್ದುಲ್ ರಹಿಮ್ ಸೇರಿದಂತೆ ಇನ್ನಿತರರು ಇದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook