ವಿದ್ಯಾಥಿಗಳು ಜ್ಞಾನ ದಾಹದ ಮೂಲಕ ಭವಿಷ್ಯ ರೂಪಿಸಿಕೊಳ್ಳಿ

ಕಲಬುರಗಿ: ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಅದಕ್ಕಾಗಿ ಜ್ಞಾನದಾಹದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಮುಂದಾಗಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವರಾದ (ಮೌಲ್ಯಮಾಪನ ವಿಭಾಗದ) ಡಾ.ಸಿ.ಎಸ್. ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸ್ಮರಣಾರ್ಥ ಅಂತರ ಮಹಾವಿದ್ಯಾಲಯ ಸಾಂಸ್ಕ್ರತಿಕ ಹಾಗೂ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಮುಖ್ಯ ಬಾsಷಣಕಾರರಾಗಿ ಬೀದರಿನ ಸಾಹಿತಿಗಳಾದ ಎಸ್.ಎಮ್.ಜಾನವಾಡಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರ್‍ರ ಅವರ ಚಿಂತನೆಗಳ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು, ವಿದ್ಯಾರ್ಥಿಗಳು ಮೂಢ ನಂಬಿಕೆಗಳನ್ನು ಬಿಟ್ಟು, ಸನ್ಮಾರ್ಗದ ಬೆಳಕಿನಡೆಗೆ ಹೋಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ನಂದಗಿರಾಚಪ್ಪ ವಹಿಸಿದ್ದರು.

ಅಂಬೇಡ್ಕರ್ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಕೆ.ಟೆಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸೋಮನಾಥ ರೆಡ್ಡಿ ಸಿ. ಪಾಟೀಲ ಸ್ವಾಗತಿಸಿದರು. ಕಾಲೇಜಿನ ಜಂಟಿ ಕಾರ್ಯದರ್ಶಿಗಳಾದ ಡಾ. ನಾಗರಾಜ ಕುಲಕರ್ಣಿಯವರು ಅತಿಥಿ ಪರಿಚಯ ಮಾಡಿದರು. ಡಾ.ರಾಜೇಂದ್ರಸಿಂಗ್ ಬಯಾಸ್ ಅವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚನ ಮಾಡಿದರು, ದೈಹಿಕ ಶಿಕ್ಷಣ ನಿರ್ದೆಶಕರಾದ ಪ್ರೋ.ಮೂರ್ತಿ ಶರಣಪ್ಪ ಅವರು ಕ್ರೀಡಾ ವರದಿಯನ್ನು ವಾಚನ ಮಾಡಿದರು. ಕಾಲೇಜಿನ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಪುರುಶೋತ್ತಮ ಜೋಷಿ ಅವರು ವಂದಿಸಿದರು.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಬಹುಮಾನವನ್ನು ಮುಖ್ಯ ಅತಿಥಿಗಣ್ಯರಿಂದ ವಿತರಿಸಲಾಯಿತು. ವಿಜೇತ ಪ್ರಾಧ್ಯಾಪಕರಿಗೂ ಬಹುಮಾನ ವಿತರಿಸಲಾಯಿತು. ಚಂದ್ರಕಲಾ ಪಾರ್ಥಿಸಿದರು. ಡಾ. ಅನೀಲಕುಮಾರ ಬಿ.ಹಾಲು ನಿರೂಪಿಸಿದರು.

ಡಾ. ಗೀತಾ ಪಾಟೀಲ, ಡಾ.ಇಂದುಮತಿ ಪಾಟೀಲ, ಡಾ. ಹುಜೂರ್ ಮಹ್ಮದ ಮೈನೋದ್ದಿನ್, ಡಾ. ಮೀನಾಕ್ಷಿ ಭರತನೂರ, ಡಾ.ಸವಿತಾ ತಿವಾರಿ, ಡಾ.ಜ್ಯೊತಿ ಕಿರಣಗಿ, ಡಾ.ಪ್ರಶಾಂರಕುಮಾರ ಎಮ್, ಡಾ.ಶಿವಲಿಂಗಪ್ಪಾ ಪಾಟೀಲ,ಡಾ.ರೇಣು ಅಣ್ಣಿಗೇರೆ, ಡಾ. ಶಶಿಕಾಂತ ಮಜಗಿ, ಪ್ರೋ.ರಾಜ ಸಮರಸೇನೆ ಮೋದಿ, ಪ್ರೋ.ಕೊತಲೆ ಬೀಮರಾಯ, ಪ್ರೋ. ಚಂದ್ರಶೇಖರ ಆರ್. ಚಿಕ್ಕೇಗೌಡ, ಡಾ.ರಾಮಕೃಷ್ಣ, ಪ್ರೋ.ಬಸವಂತರಾವ ಪಾಟೀಲ, ಪ್ರೋ. ವಿಜಯ ಕುಮಾರ ಎನ್. ಹೆಬ್ಬಾಳಕರ್, ಡಾ.ನಾಗಪ್ಪ ಟಿ.ಗೋಗಿ, ಈರಮ್ಮ ಭಾವಿಕಟ್ಟಿ, ಪೂಲಾಬಾಯಿ ಜಲದೆ ಹಾಗೂ ಉಪಸ್ಥಿತರಿದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook