ವಾಟಾಳ ನಾಗರಾಜ ಅವರನ್ನು ಕಟ್ಟಪ್ಪ ಅವಹೇಳನ-ಬಾಹುಬಲಿ-2 ನಿಷೇಧಕ್ಕೆ ಕರವೇ ಆಗ್ರಹ

ಕಲಬುರಗಿ: ನಾಡು, ನುಡಿ, ನೆಲ, ಜಲ, ಭಾಷೆಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವ ಹಿರಿಯ ಹೋರಾಟಗಾರ ವಾಟಾಳ ನಾಗರಾಜ ಅವರನ್ನು ಬಾಹುಬಲಿ ಚಿತ್ರದ ಮುಖ್ಯಪಾತ್ರಧಾರಿÀ ಸತ್ಯರಾಜ ಕಟ್ಟಪ್ಪ ಅವರು ಅವಹೇಳನಕಾರಿಯಾಗಿ ಮಾತನಾಡಿರುವುದು ಕನ್ನಡಿಗರಿಗೆ, ಕನ್ನಡಪರ ಹೋರಾಟಗಾರರ ಮನಸ್ಸಿಗೆ ಘಾಸಿಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಮನವಿ ಸಲ್ಲಿಸಿದೆ.
ಕರವೇ ಜಿಲ್ಲಾಧ್ಯಕ್ಷ ಗೋಪಾಲ ನಾಟೀಕಾರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಕೇವಲ ವಾಟಾಳ ಅವರ ವಿರುದ್ಧವಷ್ಟೇ ಮಾತನಾಡದೇ ಕನ್ನಡಿಗರ ವಿರುದ್ಧ, ಕಾವೇರಿ ನದಿಯ ವಿರುದ್ಧವೂ ಹರಿಹಾಯ್ದಿದ್ದಾರೆ. ಇದು ಒಬ್ಬ ನಟನಿಗೆ ಶೋಭೆ ತರುವಂಥದ್ದಲ್ಲ. ಆದ್ದರಿಂದ ಈ ಕೂಡಲೇ ಸತ್ಯರಾಜ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಈ ಮೂಲಕ ಆಗ್ರಹಿಸಿದರು.
ತೆಲುಗು ಭಾಷೆಯಲ್ಲಿರುವ ಬಾಹುಬಲಿ-2 ಚಿತ್ರ ಪ್ರದರ್ಶನಕ್ಕೆ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಎಲ್ಲಾ ಜಿಲ್ಲಾಧಿಕಾರಿಗಳಿಗೂ ಚಿತ್ರ ಪ್ರದರ್ಶನ ನಿಷೇಧಿಸುವಂತೆ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಸಂಪತ್ ಹಿರೇಮಠ, ವಿಜಯಕುಮಾರ ಅಂಕಲಗಿ, ಶಿವರಾಜ ಬಿರಾದಾರ್, ನಾಗರಾಜ ಕಟ್ಟಿಮನಿ, ಸಂತೋಷ ಚೌಧರಿ, ದೀಪಕ ಶಹಾಪೂರಕರ್, ಶರಣು ದ್ಯಾಮಾ, ಸಂತೋಷ್ ಚೌಹಾಣ್, ಸೈಫಾನ್ ಸೇರಿದಂತೆ ಇನ್ನಿತರರಿದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook