ಗ್ರಾಮಸಭೆ ಮಾಡುವ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಮನವಿ

ಕಲಬುರಗಿ: 2016-17 ಹಾಗೂ 2017-18 ನೇ ಸಾಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳನ್ನು ನಿಯಮಬದ್ಧವಾಗಿ ಗ್ರಾಮಸಭೆ ಮಾಡುವುದರ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಎ. ತಳಕೇರಿ ಅವರು ಜಿಲ್ಲಾ ಪಂಚಾಯತ್ ಕಛೇರಿ ಎದುರುಗಡೆ ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮ ಸಭೆಯನ್ನು ನಡೆಸಲು ಗ್ರಾಮ ಅವಶ್ಯ ಇರುವಷ್ಠು ಮಹಿಳೆಯರು/ಪರುಷರು ಭಾಗವಹಿಸಿರುವುದನ್ನು ಖಚಿತ ಪಡಿಸಿಕೊಂಡು ಗ್ರಾಮ ಸಭೆಯನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ ಬೇರೆ ದಿನಾಂಕವನ್ನು ನಿಗದಿಪಡಿಸಿ ಗ್ರಾಮ ಸಭೆಯನ್ನು ಮುಂದೂಡಿಸಬೇಕು. ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಗ್ರಾಮಸ್ಥರು ಸೂಚಿಸುವ ಫಲಾನುಭವಿಯ ಹೆಸರನ್ನು ದಾಖಲಿಸಿಕೊಳ್ಳಬೇಕು ಹಾಗೆ ದಾಖಲಿಸಿಕೊಳ್ಳುವ ಮುಂಚೆ ಗ್ರಾಮ ಸಭೆಯಲ್ಲಿರುವ ಇತರೆ ಜನರ ಒಪ್ಪಿಗೆಯನ್ನು ಪಡೆಯಬೇಕು. ಹಾಗೂ ಈ ಪ್ರಕ್ರೀಯೆಯನ್ನು ಚಿತ್ರಿಕರಿಸಿ ಸಿ.ಡಿಯಲ್ಲಿ ದಾಖಲಾಗುವಂತೆ ನೋಡಿಕೊಳ್ಳಬೇಕು. ಫಲಾನುಭವಿಗಳ ಆಯ್ಕೆ ಸಂಧರ್ಭದಲ್ಲಿ ಗ್ರಾಮಸ್ಥರ ನಡುವೆ ಗಲಾಟೆ ಪ್ರಾರಂಭವಾಗಿ ಗ್ರಾಮಸಭೆಯ ರದ್ದಾಗುವ ಸಾಧ್ಯತೆಗಳಿರುತ್ತವೆ. ಹಾಗೆ ರದ್ದಾದ ಗ್ರಾಮ ಸಭೆಯು ಇನ್ನೊಂದು ದಿನಾಂಕವನ್ನು ನಿಗದಿ ಪಡಿಸಿ ಅವಶ್ಯ ಪೋಲಿಸ್ ಬಂದೋಬಸ್ತ್‍ನೊಂದಿಗೆ ನಿಯಮಬದ್ಧವಾಗಿ ಗ್ರಾಮ ಸಭೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ವಿನಃ ಯಾವುದೇ ಕಾರಣಕ್ಕೂ ಅಧ್ಯಕ್ಷರ/ ಸದಸ್ಯರ ಪ್ರಭಾವಕ್ಕೋಳಗಾಗಿ ಗ್ರಾಮ ಪಂಚಾಯತಿಯಲ್ಲಿ ನಿಂತುಕೊಂಡು ಗ್ರಾಮ ಸಭೆಯ ಸಿ.ಡಿ ತಯಾರಿಸದಂತೆ ಕ್ರಮ ಜರುಗಿಸಬೇಕು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು/ನೋಡಲ್ ಅಧಿಕಾರಿಗಳು ನಿಯಮ ಬದ್ಧವಾಗಿ ಗ್ರಾಮ ಸಭೆಯನ್ನು ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ವಿನಃ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯತಿಯಲ್ಲಿ ನಿಂತುಕೊಂಡು ಅಧ್ಯಕ್ಷರು /ಸದಸ್ಯರು ಸೂಚಿಸಿದ ಹೆಸರನ್ನು ನೇರವಾಗಿ ಓದಿ ಸಿ.ಡಿ. ತಯಾರಿಸದಂತೆ ಕ್ರಮವನ್ನು ಜರುಗಿಸಬೇಕು. ವಸತಿ ಯೋಜನೆಗೆ ಸಂಬಂಧಿಸಿದ ಪ್ರತಿಯೊಂದು ಗ್ರಾಮ ಸಭೆಯ ನಡಾವಳಿ ಹಾಗೂ ಸಿ.ಡಿಯನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಿ ನಿಯಮಬದ್ಧವಾಗಿ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿ ಮಾತ್ರ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಇಲ್ಲದಿದ್ದರೆ ಪುನಃ ಗ್ರಾಮ ಸಭೆಯನ್ನು ಜರುಗಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಲೋಹಿತ್ ಜಿ. ಹೊಸಮನಿ, ರಾಜು ಶ್ರೀಚಂದ, ಕಿರಣಕುಮಾರ ಮೇತ್ರಿ, ರವಿಂದ್ರ ಎಂ. ಕೊಂಬಿನ್, ಜೀವನ ಬಿ. ಸೇಡಂಕರ್, ಗೋಪಾಲ್ ಎಲ್.ನಾಟೀಕರ್, ಉಮಾಕಾಂತ ಎಸ್.ಕೋಟಗೇರಾ, ಸಂತೋಷಕುಮಾರ ಎ. ತಳಕೇರಿ ಸೇರಿದಂತೆ ಇನ್ನಿತರರು ಇದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook