ಐಜಿಪಿ ಅಲೋಕಕುಮಾರ ವರ್ಗಾವಣೆ: ಸಾರ್ವಜನಿಕರ ಅಸಮಾಧಾನ


ಕಲಬುರಗಿ: ಈಶಾನ್ಯ ವಲಯ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಐಜಿಪಿ ಅಲೋಕಕುಮಾರ ವರ್ಗಾವಣೆಯ ಸುದ್ದಿ ಕೇಳುತ್ತಿದ್ದಂತೆ ಸಾರ್ವಜನಿಕ ರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದು ವರ್ಷದಿಂದೀಚೆಗೆ ಇಲ್ಲಿಗೆ ಆಗಮಿಸಿದ್ದ ಅಲೋಕಕುಮಾರ ಅವರು ರೌಡಿಗಳಿಗೆ ಸಿಂಹ ಸ್ವಪ್ನವಾಗಿದ್ದರು. ಮೇಲಾಗಿ ಕಲಬುರಗಿಯ ಟ್ರಾಫಿಕ್ ಸುಧಾರಣೆಗೆ ಅಹರ್ನಿಷಿ ಪ್ರಯತ್ನಿಸಿದ್ದರು.

ಸ್ವತಃ ತಾವೇ ರಸ್ತೆಗಳಿದು ಸುಪ್ರೀಂಕೋರ್ಟನ ನಿಯಮದಂತೆ ಹೆಲ್ಮೆಟ್ ಕಡ್ಡಾಯಗೊಳಿಸುವಲ್ಲಿ ಸಾಕಷ್ಟು ಪ್ರಯತ್ನಿಸಿ ಈ ದಿಸೆಯಲ್ಲಿ ಸಾಕಷ್ಟು ಪ್ರಯತ್ನಿಸಿದ್ದರು. ಮೇಲಧಿಕಾರಿಯ ಈ ನಡೆ ಎಸ್ಪಿ ಶಶಿಕುಮಾರ ಮತ್ತಿತರ ಅಧಿಕಾರಿಗಳಿಗೆ ಕೆಲಸ ಮಾಡಲು ಹೆಚ್ಚಿನ ಉತ್ಸಾಹ ನೀಡಿತ್ತು.

ಅಂತೆಯೇ ಜಿಲ್ಲೆ ಸೇರಿದಂತೆ ಈಶಾನ್ಯ ವಲಯ ವ್ಯಾಪ್ತಿಯಲ್ಲಿ ರೌಡಿಸಂ, ಕೊಲೆ, ಸುಲಿಗೆ, ದರೋಡೆ ಪ್ರಕರಣ ಸೇರಿದಂತೆ ಹಲವು ಅಪರಾಧ ಚಟುವಟಿಕೆಗಳಿಗೆ  ಕೊಂಚ ಬ್ರೇಕ್ ಬಿದ್ದಿತ್ತು ಎನ್ನಲಾಗುತ್ತಿದೆ.

ಹೀಗೆ ಒಬ್ಬ ಅಧಿಕಾರಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಮೂಲಕ ಜನಜೀವನ ಹಸನುಗೊಳಿಸಬೇಕೆನ್ನುವಷ್ಟರಲ್ಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಇವರ ತೆರವಾದ ಜಾಗಕ್ಕೆ ಮುರುಗನ್ ಅವರು ವರ್ಗಾವಣೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

By 

Comments
Facebooktwittergoogle_plusredditpinterestlinkedinmail

Leave a Reply

Facebook