ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ ತನಿಖೆಗೆ ಗೊಳೆ ಆಗ್ರಹ

ಆಳಂದ ; ತಾಲೂಕಿನ ಹಡಲಗಿ ಗ್ರಾಮಪಂಚಾಯಿತಿ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡಾ, ಬದು ನಿರ್ಮಾಣ ಮತ್ತು ಕೆರೆ ಹೂಳೆತ್ತುವುದರಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿರುವುದರಿಂದ ಕೂಡಲೇ ಅವ್ಯವಹಾರವನ್ನು ತನಿಖೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಹಡಲಗಿ ಗ್ರಾಮ ಘಟಕದ ಅಧ್ಯಕ್ಷ ಗುರಪ್ಪ ಡಿ.ಗೊಳೆ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಉದ್ಯೋಗ ಖಾತ್ರಿಯೋಜನೆಯಡಿಯಲ್ಲಿ ಕೂಲಿಕಾರ್ಮಿಕರಿಗೆ ಉದ್ಯೋಗವನ್ನು ನೀಡುವುದನ್ನು ಬಿಟ್ಟು ಶ್ರೀಮಂತರಿಗೆ ಮತ್ತು ನೌಕರದಾರ ಕುಟುಂಬ ವರ್ಗದವರಿಗೆ ನೀಡಲಾಗಿದ್ದು, ನೌಕರದಾರರ ಮನೆಯಲ್ಲಿ ಜಾಬ್ ಕಾರ್ಡ ಇರುವುದು ಕಂಡು ಬಂದಿದ್ದು, ಪರೋಕ್ಷವಾಗಿ ಪಂಚಾಯತ ಅಧಿಕಾರಿ, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು
ಕಾರಣಿಕರ್ತರಾಗಿರುವುದು ಕಂಡು ಬರುತ್ತಿದ್ದು ಇವರ ಮೇಲೆ ಸೂಕ್ತಕ್ರಮಕೈಗೊಳ್ಳಬೇಕೆಂದು ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದರು ಕೂಡ ಏನು ಪ್ರಯೋಜನವಾಗಿಲ್ಲ. ಕೂಡಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಪ್ಪಿಸ್ಥರ ವಿರುದ್ದ ಕೂಡಲೇ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಕೈಗೊಳ್ಳಲಾಗುವುದು ಗುರಪ್ಪಾ.ಡಿ.ಗೊಳೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ, ಜಿಲ್ಲ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಲಂಡನಕರ್, ಕಲಬುರಗಿ ನಗರಾಧ್ಯಕ್ಷ ಸಿದ್ದಣ್ಣಗೌಡ ಪಾಟೀಲ್, ನಗರ ಉಪಾಧ್ಯಕ್ಷ ಶಿವರಾಜ ಬಿರಾಜದಾರ ಸೇರಿದಂತೆ ಇನ್ನಿತರರಿದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook