ಅಮೇರಿಕಾ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ

ಕಲಬುರಗಿ; ನಗರದ ಎಸ್‍ಟಿ ಬಿಟಿ ಹತ್ತಿರವಿರುವ ನಾಗಾಂಬಿಕಾ ಮಹಿಳಾ ಬಿ.ಎಡ್. ಕಾಲೇಜಿನಲ್ಲಿ ಇಂಗ್ಲೀಷ್ ಬೋಧನಾ ಕೌಶಲ್ಯ ತರಬೇತಿಗಾಗಿ ವಿಶೇಷ ಉಪನ್ಯಾಸಕರಾಗಿ ಅಮೇರಿಕಾ ದೇಶದಿಂದ ಆಗಮಿಸಿದ್ದ ಮಿಸೆಸ್ ಮಾರ್ತಾ ರ್ಯಾನಕಿನ್ ಅವರು, ಇಂಗ್ಲೀಷ್ ಬೋಧನೆ ವಿವಿಧ ಕೌಶಲ್ಯಗಳ ಬೆಳವಣಿಗೆಯ ಕುರಿತು ಮಾತನಾಡಿದರು.

ಮಿರಾಂಡ ಅವರು ವಿದ್ಯಾರ್ಥಿಗಳ ವಿವಿಧ ಹಂತದ ಬೆಳವಣಿಗೆಯ ಕುರಿತು ಉಪನ್ಯಾಸ ನೀಡಿದರು. ನಿಕೋಲಸ್ ಅಂಡರಸನ್ ಅವರು ಆಮೇರಿಕಾ ದೇಶದಲ್ಲಿ ಬೋಧನಾ ವ್ಯವಸ್ಥೆ ಕುರಿತು ವಿವರಿಸಿದರು. ಅಲೆನ್ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಬಿರಾದಾರ ಅರವಿಂದ ಅವರು ಸನ್ಮಾನಿಸಿ, ಸ್ವಾಗತಿಸಿದರು. ಸಬೀಹಾ ಸುಲ್ತಾನಾ ವಂದಿಸಿದರು. ಉಪನ್ಯಾಸಕರುಗಳಾದ ಉದಯಕುಮಾರ, ಲಕ್ಷ್ಮೀ ಕಲಬುರಗಿ, ಶಿವಚಾಲಪ್ಪ ಪೂಜಾರಿ, ನಾಗರತ್ನ, ದಾನಪ್ಪ ವಗ್ಗಿ, ರಾಜಶೇಖರ, ಶಾಂತಪ್ಪ ಕಟ್ಟಿಮನಿ, ಇನ್ನಿತರರಿದ್ದರು.

Comments
Facebooktwittergoogle_plusredditpinterestlinkedinmail

Leave a Reply

Facebook